ನೆಲ್ಯಾಡಿ: ಕರ್ನಾಟಕ ನಾಯರ್ ಸರ್ವಿಸ್ ಸೊಸೈಟಿ .ಶಬರೀಶ ಕಲಾಮಂದಿರದಲ್ಲಿ ಓಣಂ ಆಚರಣೆ

2025ರ ಸೆಪ್ಟೆಂಬರ್ 07ರಂದು ನೆಲ್ಯಾಡಿ ಕರಯೋಗಂ ವತಿಯಿಂದ ಜರುಗಿದ ವಾರ್ಷಿಕ ಓಣಂ ಹಬ್ಬದ ವಿಶೇಷ ವರದಿ.

onam-nelyadi ನೆಲ್ಯಾಡಿ: ಕರ್ನಾಟಕ ನಾಯರ್ ಸರ್ವಿಸ್ ಸೊಸೈಟಿ .ಶಬರೀಶ ಕಲಾಮಂದಿರದಲ್ಲಿ ಓಣಂ ಆಚರಣೆ
2025ರ ಓಣಂ ಆಚರಣೆಯ ವೈಭವ

ನೆಲ್ಯಾಡಿ: ಕರ್ನಾಟಕ ನಾಯರ್ ಸರ್ವಿಸ್ ಸೊಸೈಟಿ, ನೆಲ್ಯಾಡಿ ಕರಯೋಗಂ ವತಿಯಿಂದ ಏರ್ಪಡಿಸಲಾಗಿದ್ದ ಓಣಂ ಆಚರಣೆಯು ದಿನಾಂಕ 07-09-2025 ನೇ ಭಾನುವಾರದಂದು ನೆಲ್ಯಾಡಿ ಅಯ್ಯಪ್ಪ ದೇವಸ್ಥಾನದ ಶಬರೀಶ ಕಲಾಮಂದಿರದಲ್ಲಿ ಶ್ರೀ ಶಿವದಾಸನ್ ಪಿಳ್ಳೈ, ಕರಯೋಗಂ ಅಧ್ಯಕ್ಷರು ಅವರ ನೇತೃತ್ವದಲ್ಲಿ ವಿಜೃಂಭಣೆಯಿಂದ ನಡೆಯಿತು. ನಾಯರ್ ಸರ್ವಿಸ್ ಸೊಸೈಟಿಯ ಉಪಾಧ್ಯಕ್ಷರು, ಕಾರ್ಯದರ್ಶಿ, ಸಮಿತಿ ಸದಸ್ಯರು, ಮಹಿಳಾ ವಿಭಾಗದ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಸರ್ವ ಸದಸ್ಯರು ಒಟ್ಟು ಸೇರಿ ದೀಪ ಬೆಳಗಿಸುವ ಮೂಲಕ ಉದ್ಘಾಟನೆ ನೆರವೇರಿಸಿದರು.

ಸಭೆ ಮತ್ತು ಗಣ್ಯರ ಉಪಸ್ಥಿತಿ

ನಾಯರ್ ಸರ್ವಿಸ್ ಸೊಸೈಟಿ ನೆಲ್ಯಾಡಿ ಕರಯೋಗಂ ಅಧ್ಯಕ್ಷರು ಶಿವದಾಸನ್ ಪಿಳ್ಳೈ, ಉಪಾಧ್ಯಕ್ಷರು ಸುಕುಮಾರನ್ ನಾಯರ್, ಕಾರ್ಯದರ್ಶಿ ಉದಯ್ ಕುಮಾರ್, ಟ್ರಶರರ್ ಉಪೇಂದ್ರ ಕುಮಾರ್, ಮಹಿಳಾ ವಿಭಾಗಂ ಅಧ್ಯಕ್ಷೆ ಶ್ರೀಮತಿ ಶ್ರೀಜಾ ವಿನೋದ್, ಕಾರ್ಯದರ್ಶಿ ಶ್ರೀಮತಿ ಶ್ರೀಜಾ ಸಂದೀಪ್ ಹಾಗೂ ನಾಯರ್ ಸರ್ವಿಸ್ ಸೊಸೈಟಿಯ ನೆಟ್ಟಣ, ಉಜಿರೆ, ಬೆಳ್ತಂಗಡಿ, ಇಚಿಲಂಪಾಡಿ, ನೆಲ್ಯಾಡಿ ಕೊಕ್ಕಡ ಭಾಗದ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.

ಪೂಕಳಂ ಸ್ಪರ್ಧೆ ಮತ್ತು ವಿಜೇತರು

ಓಣಂ ಹಬ್ಬದ ಪ್ರಯುಕ್ತ ವಿಶೇಷ ಪೂಕಳಂ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು, ವಿವಿಧ ಭಾಗಗಳಿಂದ ಆಗಮಿಸಿದ ತಂಡಗಳು ಅತ್ಯುತ್ಸಾಹದಿಂದ ಪಾಲ್ಗೊಂಡವು. ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಶ್ರೀಜಾ ವಿನೋದ್ ಮತ್ತು ತಂಡ ಇಚಿಲಂಪಾಡಿ, ದ್ವಿತೀಯ ಸ್ಥಾನವನ್ನು ಶ್ರೀಜಾ ಸಂದೀಪ್ ಮತ್ತು ತಂಡ ಉಜಿರೆ, ಹಾಗೂ ತೃತೀಯ ಬಹುಮಾನವನ್ನು ಗೋಪಿಕಾ ಮತ್ತು ತಂಡ ಉಜಿರೆ ಪಡೆದುಕೊಂಡಿದ್ದಾರೆ.

“ಸಾಂಪ್ರದಾಯಿಕ ಆಚರಣೆಗಳು ಮತ್ತು ಹಬ್ಬಗಳು ನಮ್ಮಲ್ಲಿ ಪರಸ್ಪರ ಬಾಂಧವ್ಯವನ್ನು ಗಟ್ಟಿಗೊಳಿಸುವುದರ ಜೊತೆಗೆ ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿಯ ಪರಿಚಯವನ್ನು ಮಾಡಿಕೊಡುತ್ತವೆ.”

— ಕರಯೋಗಂ ಸಮಿತಿ

ಪ್ರತಿಭಾ ಪುರಸ್ಕಾರ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು

2024-25 ನೇ ಶೈಕ್ಷಣಿಕ ವರ್ಷದಲ್ಲಿ 10ನೇ ತರಗತಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಿ ಸನ್ಮಾನಿಸಲಾಯಿತು. 10ನೇ ತರಗತಿಯಲ್ಲಿ ಪ್ರಥಮ ಸ್ಥಾನವನ್ನು ಶ್ರೇಯಾ ಉಜಿರೆ, ದ್ವಿತೀಯ ಸ್ಥಾನವನ್ನು ನಿಶಾಂತ್ ಎಸ್ ನೆಟ್ಟಣ ಹಾಗೂ ತೃತೀಯ ಸ್ಥಾನವನ್ನು ಪ್ರೀತಮ್ ನೆಟ್ಟಣ ಪಡೆದುಕೊಂಡರೆ, ಪಿಯುಸಿಯಲ್ಲಿ ಪ್ರಾಪ್ತಿ ಬೆಳ್ತಂಗಡಿ ಹಾಗೂ ಅಕ್ಷಯ್ ಕುಮಾರ್ ಇಚಿಲಂಪಾಡಿ ಗೌರವಕ್ಕೆ ಪಾತ್ರರಾದರು.

ಪಂಚಮಿ ಹಾಗೂ ಪೌರ್ಣಮಿ ಅವರಿಂದ ಪ್ರಾರ್ಥನೆ ನಂತರ, ಆಚಾರ್ಯ ಸ್ಮರಣೆ ನಡೆಯಿತು. ರಾಜೇಶ್ ಕೊಕ್ಕಡ ಸ್ವಾಗತ ಕೋರಿದರು. ತದನಂತರ ಪುಟಾಣಿಗಳಿಂದ ಹಾಗೂ ಸರ್ವ ಸದಸ್ಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಆಟೋಟ ಸ್ಪರ್ಧೆಗಳು ನೆರವೇರಿದವು. ರಾಜೇಶ್ ಕುಮಾರ್ ಮತ್ತು ಗಣೇಶ್ ಕುಮಾರ್ ಕೊಕ್ಕಡ ಕಾರ್ಯಕ್ರಮ ನಿರೂಪಿಸಿದರು ಹಾಗೂ ಉದಯ್ ಕುಮಾರ್ ವಂದನಾರ್ಪಣೆ ಸಲ್ಲಿಸಿದರು. ಮಧ್ಯಾಹ್ನ ಸಾಂಪ್ರದಾಯಿಕ ಓಣಂ ಸದ್ಯ ವ್ಯವಸ್ಥೆ ಮಾಡಲಾಗಿತ್ತು.

Share this content:

Post Comment

You May Have Missed